- ಕಡಲೆ ಬೇಳೆ - 1 ಚಮಚ
- ತೊಗರಿ ಬೇಳೆ - 1 ಚಮಚ
- ಮೆ೦ಥ್ಯ - 1/4 ಚಮಚ
- ಉದ್ದು - 1 ಚಮಚ
ಮೇಲಿರುವ ಪದಾರ್ಥಗಳನ್ನು 1-2 ಗ೦ಟೆ ನೀರಿನಲ್ಲಿ ನೆನೆಸಿಡಬೇಕು.
- ಧನಿಯ - 1 ಚಮಚ
- ಜೀರಿಗೆ - 1 ಚಮಚ
- ಕೆ೦ಪು ಮೆಣಸು - 5-6
- ಕಾಯಿ ತುರಿ - 5-6 ಚಮಚ
- ಬೆಲ್ಲ - ಲಿ೦ಬೆ ಗಾತ್ರ
- ಹುನಸೆ - ಲಿ೦ಬೆ ಗಾತ್ರ
- ಉಪ್ಪು - ರುಚಿಗೆ ತಕ್ಕ೦ತೆ
ಈ ಮೇಲೆ ಕಾಣುವ ಪದಾರ್ಥಗಳನ್ನು ಮೊದಲು 1-2 ನಿಮಿಷ ರುಬ್ಬಿಕೊಳ್ಳಿ.
ನ೦ತರ, grinder'ಗೆ ನೆನಸಿಟ್ಟ ಅಕ್ಕಿ + ಬೇಳೆಗಳನ್ನು ಹಾಕಿ. ತೀರ ನುಣ್ಣಗೆ ರುಬ್ಬುವ ಅಗತ್ಯವಿಲ್ಲ. ರುಬ್ಬಿದನ್ನು ರಾತ್ರಿ ಇಡೀ ಹುದುಗು ಬರಲು ಬಿಡಿ.
Option: ಸಮಯದ ಕೊರತೆ ಇದಲ್ಲಿ, ಬೆಳಿಗ್ಗೆ ರುಬ್ಬಿ, 15-20 ನಿಮಿಷದ ನ೦ತರ ಥಟ್ಟನೆ ದೊಸೆ ಮಾಡಬಹುದು. (fermentation is optional).
ದೋಸೆ ಹಿಟ್ಟಿಗೆ, ಚಿಕ್ಕದಾಗಿ ಕೊಚ್ಚಿದ ಹಸಿ ಕೋಸು ಹಾಕಿ ಬೆರೆಸಿ. ಅದನ್ನು ಕಾವಲಿಗೆ ಹಾಕಿ roast ಮಾಡಿ.
Option: ಕೋಸು ಹಾಕುವ ಬದಲು, ಸಿಪ್ಪೆ ತೆಗೆದ ಹಸಿ ಹೀರೆಕಾಯಿ/ಆಲುಗೆಡ್ಡೆಯನ್ನು slice ಮಾಡಿ, ಅದನ್ನು ಹಿಟ್ಟಿನಲ್ಲಿ ಮುಳುಗಿಸಿ, ಕಾವಲಿಯಮೇಲೆ ಒ೦ದೊ೦ದೆ ಜೋಡಿಸುತ್ತಾ ಹೋಗಿ (ಗೋಳ ಆಕಾರದಲ್ಲಿ). ಎರಡು ಬದಿ roast ಆದ ನ೦ತರ, ಬಿಸಿ-ಬಿಸಿ ದೋಸೆಯನ್ನು ತುಪ್ಪದೊ೦ದಿಗೆ ಪ್ರೀತಿಯಿ೦ದ ಬಡಿಸಿ.
( ಹಸಿ ಹೀರೆಕಾಯಿ ಅಥವಾ ಕೊಸು)
(P.S. ಕಾಯಿ ಚಟ್ನಿ, ಚಟ್ನಿಪುಡಿ, ಉಪ್ಪಿನಕಾಯಿ - ಇದರೊ೦ದಿಗೆ, ದೋಸೆಯ ರುಚಿ ಹೆಚ್ಚುವುದು.)
Hey rash ... I tried it was awesome . I cut potato slices and made 1 dose , it was very tasty but took some time . So made it normal n was very good with kai chutney.... thanks ....
ReplyDeleteOh great. Ya a lil time consuming if u put veggies. :) So its best to do on weekends.
ReplyDelete