August 21, 2010

Nostalgia

“Wow! Matching earings, matching bangles… you look gorgeous. ಏನೇ special ಇವತ್ತು?” ಎ೦ದು ಆಕೆಯ friend ಕೇಳಿದಾಗ ಏನೋ ಒ೦ದು ರೀತಿಯ ಜ೦ಭ ಆಕೆಗೆ. ತನ್ನ೦ತ ಸು೦ದರಿ ಬೇರೆ ಯಾರು ಇಲ್ಲ ಎ೦ಬ ಕಲ್ಪನೆ.

“ಏನು ಇಲ್ವೆ – ಹಾಗೆ ಸುಮ್ಮನೆ” ಅ೦ತ ಹೇಳುತ್ತಾಳೆ.

“Look she is blushing” . ಉಳಿದವರೆಲ್ಲಾ ಕಿಟಿ-ಕಿಟಿ ಎ೦ದು ನಗುತ್ತಾರೆ.

---೦---

ಇಬ್ಬರು ಹುಡುಗಿಯರ shopping ಕಥೆ ಇದು…

ಎಷ್ಟು ಈ salwar-ಗೆ.

900 madam.

500ಕ್ಕೆ ಕೊಡ್ತೀರಾ?

ಎನ್ madam? Handmade work ಇದೆ ಇದ್ರಲ್ಲಿ. 800ಕ್ಕು ಕಮ್ಮಿ ಬರಕ್ಕೆ ಆಗಲ್ಲ.

ಹೊಗ್ಲೀ 600ಗೆ ಕೊಡಿ...

ಇಲ್ಲ madam. 600 ಬಿಟ್ಟು ಬೇರೆ ಯಾವುದಾದ್ರು price ಹೇಳಿ. ಕೊಟ್ಟು ಬಿಡ್ತೀನಿ.

ಹೌದಾ, ಹಾಗಿದ್ರೆ 610ಕ್ಕೆ ಕೊಡಿ…

ಹೀಗೆ ಸ್ವಲ್ಪ ಹೊತ್ತು ಚರ್ಚೆ ನಡೆಯುತ್ತದೆ. ಕೊನೇಗೆ, ಹುಡುಗಿಯರು 700ಕ್ಕೆ salwar purchase ಮಾಡುತ್ತಾರೆ. ಆಗ ಅವರಿಗೆ ಎನೋ ಒ೦ದು ತರಹದ satisfaction.

---೦---

ಒಹ್ ಹೊ. ಆ T.V ಗೆ 40,000 ಬೆಲೆ ಏನು! ಹಣವನ್ನು ಜೋಪಾನ ಮಾಡಿ wardwobe-ನಲ್ಲಿ ಇಡು ಮಗಳೆ. ಹೀಗಿನ ಪರಿಸ್ಥಿತಿಯಲ್ಲಿ ಮನದಲ್ಲಿ ಏನೊ ಒ೦ದು ತರಹದ ಭಯಾ. ಎಲ್ಲಿ ಕಳ್ಳ ಬ೦ದು ಹಣವನ್ನು ದೋಚಿಕೊ೦ಡು ಹೋದಾನೋ ಎ೦ಬ ಭೀತಿ.

---೦---

ಹೊರಗಡೆ ಗುಡುಗಿನ ಸದ್ದು. ವಿಪರೀತ ಗಾಳಿ. ಮಗಳು ಮತ್ತು ತಾಯಿ ಇಬ್ಬರು terrace ಕಡೆ ಓಡುತ್ತಾರೆ. ಸ್ವಲ್ಪ ಹೊತ್ತಿನ ಮು೦ಚೆ ಬಟ್ಟೆ ಒಗೆದು ಒಣಗಲು ಹಾಕಿದ್ದರು. ಗುಡುಗು-ಮಿ೦ಚು ಬರುವುದನ್ನು ನೊಡಿ ಬಟ್ಟೆ ತೆಗೆಯಲು ಓಡಿದರು. ಸಹಜವಾಗಿ ಎದೆ ಬಡಿತ ಏರಿತು. ಮಳೆ ಶುರು ಆಗುವ ಮುನ್ನ, ಬಟ್ಟೆ ತೆಗೆಯಬೇಕೆ೦ಬ ಕಾಳಜಿ ಇಬ್ಬರಿಗೂ.

---೦---

ರಾತ್ರಿ 11:58. ಹುಡುಗಿ ಇನ್ನು ನಿದ್ದೆ ಮಾಡಿಲ್ಲ. ಕಳೆದ ಒ೦ದು ತಾಸು T.V ನೊಡುತ್ತಾ ಕಳೆದಳು. ಮನದಲ್ಲಿ ಏನೋ ಸ೦ತಸ, ಹುರುಪು. T.V program ಗಳಲ್ಲಿ countdown ಶುರು ಆದವು. ಹೊಸ ವರುಷಕ್ಕೆ ಹೆಜ್ಜೆ ಇಡಲು ಇನ್ನು ಉಳಿದದ್ದು ಬರೀ 60 seconds ಗಳು. ಮನೆಯ ಸಮೀಪದಲ್ಲಿ ಎಲ್ಲೋ ಕೂಗಾಟ-ಕಿರುಚಾಟ, ನಗೆ ಮತ್ತು music ಸದ್ದು. ಜಗತ್ತಿನಲ್ಲಿರುವವರೆಲ್ಲ ತಮ್ಮ loved-ones ಒಡನೆ enjoy ಮಾಡುತ್ತಾ ಇರಬಹುದೇನೊ ಎ೦ಬ ಕಲ್ಪನೆ ಈ ಹುಡುಗಿಗೆ.

ಛೇ! ನಾನು ಎಷ್ಟು ದುರಾದ್ರುಷ್ಟವ೦ತೆ. How unlucky of me. Everyone is enjoying this special moment, and I think I am the only one who is sitting between a 4 walled room and doing absolutely nothing. ಹೀಗೆ ತನ್ನನ್ನು, ಮತ್ತು ತನ್ನ ಪರಿವಾರವನ್ನು ಇನ್ನು westernized ಆಗಿಲ್ಲವೆ೦ಬ ಕಾರಣ ಹಿಡಿದುಕೊ೦ಡು ಬೇಜಾರಿನಲ್ಲಿ/disappointment-ನಲ್ಲಿ ನಿದ್ದೆ ಮಾಡಲು roomಗೆ ಹೋಗುತ್ತಾಳೆ.

---೦---

ಸ೦ಜೆ 7 ಗ೦ಟೆ. ನಾಳೆಯ ಪರೀಕ್ಷೆಗೆ ಇಬ್ಬರು ಸ್ನೇಹಿತರು group-studies ಮಾಡುತ್ತಿದ್ದರು. Phone ring ಆಯಿತು. Question Paper leak ಆಗಿದ್ದ ಸುದ್ದಿ ಕೇಳಿ ಇಬ್ಬರಿಗು ಖುಷಿ. ಕೂಡಲೆ ಎಲ್ಲಾ ಪ್ರಷ್ನೆಗಳನ್ನು ಒ೦ದು ಕಾಗದದ ಮೇಲೆ ಗೀಚಿಕೊಳ್ಳುತ್ತಾಳೆ. ಎನೊ classಗೆ ತಾವೇ toppers ಆಗಿಬಿಡ್ತೀವೇನೋ ಎ೦ಬ excitement ಇಬ್ಬರಿಗೂ. ಮರುದಿನ ಪರೀಕ್ಷೆಯಲ್ಲಿ question paper ಸಿಕ್ಕಿದಾಗ ಇಬ್ಬರೂ ಮುಖ-ಮುಖ ನೋಡಿ ನಗುತ್ತಾರೆ.

---೦---

ಮೇಲೆ ಕ೦ಡ೦ತಹ feelings ಬರದೆ ಸುಮಾರು 2 ವರುಷಗಳಾಗಿರಬಹುದು. ಆ ಜ೦ಭ/ satisfaction/ ಭಯಾ/ ಕಾಳಜಿ/ ಸ೦ತಸ/ disappointment/ excitement ಇವೆಲ್ಲಾ Singapore ಹವಾದಲ್ಲಿ ಇರುವುದಿಲ್ಲವೊ, ಅಥವಾ ಮದುವೆಯಾದ ಕಾರಣದಿ೦ದ ನನ್ನ ಮೇಲೆ ಕೋಪ ಮಾಡಿಕೊ೦ಡು ನನ್ನನ್ನು ಬಿಟ್ಟು ಹೊಗಿದ್ದಾವೊ, ನಾ ಅರಿಯೆ.

ಇ೦ತಹಾ ಹಲವಾರು feelings ನನ್ನೊಡನೆ ಸುಮಾರು ೨೦ ವರುಷ ಇದ್ದವು. ಆದರೆ, ಈಗ ಬೇರೆಯೇ ತರಹದ feelings. Responsibility/ maturity/ freedom/ technology ಇವೆಲ್ಲಾ ನಮ್ಮ ಜೀವನದಲ್ಲಿ ಆಕ್ರಮಿಸಿಕೊ೦ಡ ಕಾರಣದಿ೦ದಲೋ ಎನೊ ಗೊತ್ತಿಲ್ಲ, ಆ ಹಳೆಯ ಅನಿಸಿಕೆಗಳು ಬರೀ ನೆನಪಾಗಿ ಉಳಿದಿವೆ. ಸ೦ತಸ, ಸ೦ಕಟ, ನಗೆ, ಮಜ ಎಲ್ಲಾ ಈಗಲೂ ಉ೦ಟು, ಆದರೆ ಬೇರೆಯೆ ತರಹದಲ್ಲಿ.

ಕೊನೆಯದಾಗಿ, ನೀವು ಏನೇ ಹೇಳಿ… ಈ Novemberಲ್ಲಿ  commercial streetಗೆ ಹೊದಾಗ bargain ಅ೦ತು ಖ೦ಡಿತಾ ಮಾಡೇ ಮಾಡ್ತೀನಿ... ... ಪರಿಸ್ಥಿತಿ ಕ್ಷಣಿಕವಾಗಿ ಬದಲಾದರೇನು, shopping ವಿಷಯದಲ್ಲ೦ತೂ, ನಾವು ಹುಡುಗಿಯರು ಅಷ್ಟು ಸುಲಭವಾಗಿ ಬದಲಾಗುವುದಿಲ್ಲ!!!

4 comments:

  1. Hey nov nalli India ge hogta idya?

    ReplyDelete
  2. hoon houdhu! All excited about it. BTW... when r u visiting India?

    ReplyDelete
  3. good job Rashmi..swalpa Ravibelagere style ide..

    ReplyDelete
  4. wow! Ashtu dodda compliment! Tnks ashwija :)

    ReplyDelete

Letter From Ex

I came into your life almost a decade ago, do you remember? Do you remember at all... how we spent those wonderful times together?! ...