ನಿನ್ನಿ೦ದ ದೂರ ಸರೆದೆ,
ಮತ್ತೊಬ್ಬರ ಸನಿಹ ಬ೦ದೆ,
ದಿನ ಕಳೆದವು, ಮಾಸ ಉರಳಿದವು
ನಿನ್ನ ನೆನಪು, ನಿನ್ನ ಕನಸು ಕಾಡಿದವು
ಇರಲಾರೆ ಇನ್ನು... ಬರುತಿರುವೆ ನಾನು
ನಿನ್ನನ್ನು ನೋಡಲು... ನಿನ್ನನ್ನು ಸೇರಲು,
ಮನ ಬಿಚ್ಚಿ ಮಾತನಾಡಲು,
ನಿನ್ನ ಕಷ್ಟ-ಸುಖಕ್ಕೆ ಕಿವಿ ಕೊಡಲು
ನೂರೆ೦ಟು ಸ೦ತಸದ ಕಥೆ ಹೇಳಲು,
ನಿನ್ನ ಕೈ ಅಡುಗೆ ಆಸ್ವಾಧಿಸಲು
ಓ ಅಮ್ಮ! ಆ ದಿನ ಹತ್ತಿರ ಬರುತಿದೆ,
ಪ್ರತೀಕ್ಷೆ ಇಲ್ಲಿಗೆ ಮುಗಿಯುತಿದೆ!
-ನಿನ್ನ ಪ್ರೀತಿಯ ಮಗಳು,
ರಶ್ಮಿ!
ಮತ್ತೊಬ್ಬರ ಸನಿಹ ಬ೦ದೆ,
ದಿನ ಕಳೆದವು, ಮಾಸ ಉರಳಿದವು
ನಿನ್ನ ನೆನಪು, ನಿನ್ನ ಕನಸು ಕಾಡಿದವು
ಇರಲಾರೆ ಇನ್ನು... ಬರುತಿರುವೆ ನಾನು
ನಿನ್ನನ್ನು ನೋಡಲು... ನಿನ್ನನ್ನು ಸೇರಲು,
ಮನ ಬಿಚ್ಚಿ ಮಾತನಾಡಲು,
ನಿನ್ನ ಕಷ್ಟ-ಸುಖಕ್ಕೆ ಕಿವಿ ಕೊಡಲು
ನೂರೆ೦ಟು ಸ೦ತಸದ ಕಥೆ ಹೇಳಲು,
ನಿನ್ನ ಕೈ ಅಡುಗೆ ಆಸ್ವಾಧಿಸಲು
ಓ ಅಮ್ಮ! ಆ ದಿನ ಹತ್ತಿರ ಬರುತಿದೆ,
ಪ್ರತೀಕ್ಷೆ ಇಲ್ಲಿಗೆ ಮುಗಿಯುತಿದೆ!
-ನಿನ್ನ ಪ್ರೀತಿಯ ಮಗಳು,
ರಶ್ಮಿ!